Sunday, March 24, 2013

ನಮಗ್ಯಾಕೆ ಬೇಕು ರಾಜಕೀಯ! ಅದರಿಂದ ನಮಗೆ ಏನು ಪ್ರಯೋಜನ

ನನ್ನ ಕೆಲವು ಸ್ನೇಹಿತರಿಗೆ, ಈ ತರದ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಅಂತೆಲ್ಲ ನಮ್ಮ  ಶಾಲೆಗಳಲ್ಲಿ ಓದಿದ್ದೇವೆ. ಆದರೆ ನಮ್ಮ ಪ್ರಭುಗಳು ಮತ್ತು ಪ್ರಜೆಗಳು ಇಬ್ಬರು ದ್ವಿಮುಖವಾಗುತ್ತಿರುವುದು ವಿಷಾದದ ಸಂಗತಿ.

ನಮ್ಮಲ್ಲಿ ಬಹಳ ರೀತಿಯ ಜನರಿದ್ದಾರೆ. ನಾನು ಇಲ್ಲಿ ಹೇಳುತ್ತಿರುವುದು ಆರ್ಥಿಕವಾಗಿ. ಒಂದು ಉತ್ತಮ ವರ್ಗ, ಸರ್ಕಾರದಿಂದ ಅಷ್ಟೇನೂ ಬಯಸದೆ ತಮ್ಮ ಪಾಡಿಗೆ ತಾವಿರುವ ಮತ್ತು ಮನಸಿದ್ದರೆ ಬಂದು ವೋಟು ಹಾಕುವ ಜನ. ಮತ್ತೊಂದು ಮಧ್ಯಮ ವರ್ಗ, ಇವರು ಸರಿಯಾಗಿ ವೋಟು ಮಾಡುವ ಸರ್ಕಾರದಿಂದ ಸ್ವಚ್ಛ, ಪಾರದರ್ಶಕ ಮತ್ತು ಉತ್ತಮ ಆಡಳಿತವನ್ನು ಬಯಸುವ ಜನ. ಇನ್ನೊಂದು ಆರ್ಥಿಕವಾಗಿ ದುರ್ಬಲ ವರ್ಗ, ಇವರು ಅವರ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ವೋಟು ಕೊಡುವ ಜನ.

ನಮ್ಮ ದೇಶದಲ್ಲಿ ನಾವು ಓದಿರುವಂತೆ ಮತ್ತು ನೋಡಿರುವಂತೆ ಆರ್ಥಿಕವಾಗಿ ದುರ್ಬಲ ವರ್ಗದವರೇ ಜಾಸ್ತಿ. ಬಹಳಷ್ಟು ಜನಕ್ಕೆ     Maslow's hierarchy of needs ಬಗ್ಗೆ ಗೊತ್ತಿರಬಹುದು( ಗೊತ್ತಿರದವರು ಇಲ್ಲಿ ಓದಿ - http://en.wikipedia.org/wiki/Maslow's_hierarchy_of_needs). ಮೊದಲು ಮಾನವನಿಗೆ ಬೇಕಾಗಿರುವುದು ಗಾಳಿ, ಊಟ, ವಸತಿ ಮತ್ತು ಆ ಕ್ಷಣದ ಅನುಕೂಲಗಳು. ಇದರಿಂದಾಗಿಯೇ ಬಹಳ ಜನ ನಮ್ಮಲ್ಲಿ ದುಡ್ಡು ತಗೊಂಡು ವೋಟು ಹಾಕುವುದು ಅಥವಾ ವಿವೇಚನೆ ಇಲ್ಲದೆ ವೋಟು ಹಾಕುವುದು ಎಂಬುದು ನನ್ನ ಅನಿಸಿಕೆ(ಇದು ತಪ್ಪು ಇರಲು ಬಹುದು, ನೀವು ಯೋಚಿಸಿ)

ಆದರೆ ಅರ್ಥಿಕ ಸ್ಥಿತಿ ಉತ್ತಮವಾದಂತೆ ಈ ರೀತಿಯ ಪರಿಸ್ಥಿತಿ ಬದಲಾಗುತ್ತಾ ಹೋಗುತ್ತದೆ. ಇದರ ಬಗ್ಗೆ ಅಷ್ಟೇನೂ ತಲೆಯ ಕೆಡಿಸಿ ಕೊಳ್ಳುವ ಅಗತ್ಯ ಇಲ್ಲ. ಆದರೆ ನಮ್ಮ ಮನಸ್ಥಿತಿ ದೇಶವೇ ಹೀಗೆ, ನಮ್ಮ ಜನ ಒಳ್ಳೆವರನ್ನ ಗೆಲ್ಲಿಸುವುದಿಲ್ಲ, ಗೆದ್ದರೂ ಅವರು ಕೆಲಸ ಮಾಡುವುದಿಲ್ಲ ಅನ್ನುವ ಮನೋಭಾವ ಬದಲಾಗಬೇಕಿದೆ. ನಮ್ಮಲ್ಲಿ ಬದಲಾವಣೆಗಳು ಆಗುತ್ತಿವೆ, ಆದರೆ ಅದು ನಿಧಾನವಾಗಿ ನಡೆಯುತ್ತಲೇ ಇವೆ. RTI, ಭೂಮಿ (http://bhoomi.karnataka.gov.in/landrecordsonweb/) ಮತ್ತು ಸಕಾಲ ನನಗೆ ತಿಳಿದಿರುವಂತೆ ಉತ್ತಮ ಯೋಜನೆಗಳೇ. It takes time ಅಷ್ಟೇ! 


ಇನ್ನೇನು ಕರ್ನಾಟಕದ ವಿಧಾನಸಭೆಗೆ ಚುನವಾಣೆ ಘೋಷಣೆಯಾಗಿದೆ. ನಮ್ಮ ದೇಶವೇ ಹೀಗೆ ಉದ್ದರವಾಗೋಲ್ಲ, ನಮ್ಮ ಜನಾನೇ ಹೀಗೆ ಅನ್ನುವುದನ್ನ ಬಿಟ್ಟು. ನಾವೆಲ್ಲಾ ವೋಟು ಹಾಕೋಣ, ಮತ್ತು ಮತ್ತೆ ಕೆಲವರಲ್ಲಿ ಜಾಗೃತಿ ಮೂಡಿಸಿ  ಅವರು ಸರಿಯಾದ ಅಭ್ಯರ್ಥಿಗಳಿಗೆ ವೋಟು ಹಾಕುವಂತೆ ಪ್ರೋತ್ಸಾಹಿಸೋಣ. 

ನನ್ನದೊಂದು ಕೋರಿಕೆ: ನನ್ನ ಸ್ನೇಹಿತರು, ಜೊತೆಯಲ್ಲಿ India Against Corruptionನಲ್ಲಿ ಕೆಲಸ ಮಾಡಿದ ಯೋಗೇಶ್ ದೇವರಾಜ್ (https://www.facebook.com/YogeshDevarajForMLA) ಬ್ಹೊಮ್ಮನಹಳ್ಳಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಿರುವರು. ಯೋಗೇಶ್, ಬೆಂಗಳೂರಿನ RVCEಯಲ್ಲಿ ಓದಿ ಸರಿಸುಮಾರು ೨೦ ವರ್ಷ ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡಿ(ಅದರಲ್ಲಿ ೧೩ ವರ್ಷ ಅಮೇರಿಕದಲ್ಲಿ) ಈಗ ನಮ್ಮೆಲ್ಲರ ಒತ್ತಾಯಕ್ಕೆ, ಚುನಾವಣಾ ಕಣದಲ್ಲಿ ಇದ್ದಾರೆ. ದಯವಿಟ್ಟು ನೀವು ಅವರ ಬಗ್ಗೆ ಇಲ್ಲಿ "http://www.yogeshdevaraj.in/" ಮತ್ತಷ್ಟು ತಿಳಿದುಕೊಳ್ಳಿ. ನಿಮಗೆ ಈ ವ್ಯಕ್ತಿ ಉತ್ತಮ ಎಂದು ಅನಿಸಿದರೆ ಮಾತ್ರ ದಯವಿಟ್ಟು ಸ್ವಲ್ಪ ಸಹಾಯ ಮಾಡಿ. ಅವರ ಬಗ್ಗೆ ಜನಾಭಿಪ್ರಾಯ ಬೆಳೆಸಿ(https://www.facebook.com/YogeshDevarajForMLA), ಆದರೆ  ಸ್ವಲ್ಪ ಹಣ ಸಹಾಯ ಮಾಡಿ, ನಮ್ಮ ಜೊತೆ ಬಂದು ಮನೆ ಮನೆ ಸುತ್ತಿ ಜನರಲ್ಲಿ ಜಾಗ್ರತಿ ಮೂಡಿಸಿ.
ನಮ್ಮ ಕಚೇರಿಯಲ್ಲಿ ಕಂಡ ಪೋಸ್ಟರ್! Be A Hero
ಯೋಗೇಶ್ರವರ ಕಿರು ಪರಿಚಯ


3 comments:

Omprakash Rudraiah said...

Very thoughtful as usual :). I'm very glad that you are doing what you are doing...but at the same time little embarrassed for doing just the talking. Good luck to you and Mr. Devraj. I'll pass the word.

Harsha Hegde said...

ಸರ್ಯದ ಮಾತು ಕಣಲ . ಆದ್ರೆ ಸ್ವಲ್ಪ ವಿಷಾದ ಏನ್ ಅಂದ್ರೆ ಅದೇ ಕ್ಷೇತ್ರದಿಂದ ಅಶ್ವಿನ್ ಎಂಬುವವರು ( http://www.ashwin4mla.org/) ನಿಲ್ತಾ ಅವ್ರೆ . ನನ್ ಸ್ನೇಹಿತನೊಬ್ಬನಿಂದ ಕೇಳಿದ್ದು ಇವರು ಸಜ್ಜನ ಮತ್ತೆ ಒಳ್ಳೆ vision ಐಥೆ ಅಂತ
ಇಂಗೆ ಎಲ್ಡ್ ಎಲ್ಡು ಒಳ್ಳೆ candidateಟು ಒಂದೇ ಕಡೆ ನಿಂತ್ರೆ voteಟು ಅಂಚ್ಹೊಗಕಿಲ್ವೆ?

ತ್ರಿಲೋಚನ ರಾಜಪ್ಪ(Thrilochana Rajappa) said...

ಹೂ ಹರ್ಷ! ಆದ್ರೆ ಅಶ್ವಿನ್ ಮನೆ ಇರೋದು ಬೇರೆ ಕ್ಷೇತ್ರ ಅಯಪ್ಪ ಯಾಕೆ ಬ್ಹೊಮ್ಮನಹಳ್ಳಿಲಿ ನಿಲ್ತಿದರೋ ಗೊತ್ತಿಲ್ಲ. ನಾನು ಅವರು MLCಗೆ ನಿಂತಾಗ ಸಪೋರ್ಟ್ ಮಾಡಿದ್ದೆ. ಇಬ್ರನೂ ನೋಡಿದ ಮೇಲೆ ಯೋಗೇಶ್ ಯಾಕೋ ನಮ್ಮವನು ಅನಿಸಿತು ಅದ್ಕೆ ಅವ್ರ್ಗೆ ಈ ಸರಿ ಸಹಾಯ ಮಾಡ್ತಿದೀನಿ!